ಹುಳಿಯಾರು : ಪಟ್ಟಣದ ಎಪಿಎಂಸಿ ರಾಗಿ ಖರೀದಿ ಕೇಂದ್ರದ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಾಸನ ಬದ್ದ ಎಂ.ಎಸ್.ಪಿ ಗಾಗಿ ಹಾಗೂ ರಾಗಿ ಖರೀದಿ ಕೇಂದ್ರಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಪ್ರತಿಭಟನೆ ನಡೆಸಲಾಯಿತು.
ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾರ್ ರವರು ಡಾ. ಎಂ.ಎಸ್. ಸ್ವಾಮಿನಾಥನ್ ಅವರ ವರದಿಯ ಪ್ರಕಾರ ಸಿ2 + 50 ಮಾನದಂಡ ಆಧಾರವಾಗಿ ಎಮ್.ಎಸ್.ಪಿ ಕಾನೂನು ಬದ್ದಗೊಳಿಸಿಸಲು ಒತ್ತಾಯಿಸಿ 46 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂ.ಎಸ್.ಪಿ ಕಾನೂನು ಬದ್ಧ ಗೊಳಿಸುವ ಮೂಲಕ ಅವರನ್ನು ಪ್ರಾಣಾಪಯಾದಿಂದ ಪಾರು ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಖೇನ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಹಾಗೂ ಜಿಲ್ಲೆಯ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಆಗುವ ಅನ್ಯಾಯ ಅಕ್ರಮಗಳನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ಮನವಿ ಎ.ಪಿ.ಎಂ.ಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು
ತಾಲ್ಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಮಾತನಾಡಿ ತೂಕ ಸರಿಯಾಗಿರಬೇಕು ತೂಕ ವ್ಯತ್ಯಾಸ ಮಾಡಿ ರೈತರನ್ನು ಮುಳುಗಿಸುವಂತ ಕೆಲಸ ಮಾಡಬೇಡಿ ಹಿಂದೆ ಬಂದಂತಹ ಟ್ರೇಡಿಂಗ್ ನವರು ಕೋಟಿ ಗಟ್ಟಲೆ ಹೊಡೆದುಕೊಂಡು ಹೋಗಿದ್ದಾರೆ, ದಿನ ನಿತ್ಯ 10 ರಿಂದ 20 ಚೀಲದಷ್ಟು ರಾಗಿ ಬಿದ್ದಿರುವುದನ್ನು ನಾನು ನೋಡಿದ್ದೇನೆ, ಒಂದು ಕ್ವಿಂಟಾಲ್ ಗೆ 3 ಕೆಜಿ ಇಲ್ಲೆ ಬಿದ್ದಿರುತ್ತದೆ ಎಷ್ಟು ರಾಗಿ ಆಯ್ತು ಯಾಕೆ ಉದ್ದಾರ ಆಗೋಲ್ಲ ಹೇಳಿ ಇಲ್ಲಿ ಕೆಲಸ ಮಾಡುವಂತವರು, ನಾವು ರೈತರು ರಾತ್ರಿ ಹಗಲು ಕಷ್ಟ ಪಟ್ಟು 4 ಚೀಲ ರಾಗಿ ಬೆಳೆಯಲಿಕ್ಕೆ ಆಗೋಲ್ಲ ಇಲ್ಲಿ ತೂಕ ಮಾಡುವವರು ಸದಿನ 5 ಕೆ.ಜಿ ರಾಗಿ ಮಾಡಿಕೊಂಡು ಹೋಗುತ್ತಾರೆ 30 ದಿನಕ್ಕೆ ಎಷ್ಟು ರಾಗಿ ಆಗುತ್ತದೆ ಇದಕ್ಕೆ ನೀವು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದರು.
ರೈತಸಂಘದ ಒತ್ತಾಯಗಳು : ಖರೀದಿ ಕೇಂದ್ರಗಳಲ್ಲಿ 50 ಕೆಜಿ 300 ಗ್ರಾಂ ತೂಕಕ್ಕೆ ಬದಲಾಗಿ 51 ಕೆ.ಜಿ 500 ಗ್ರಾಂ ತೂಕ ಮಾಡುವ ಮೂಲಕ ರೈತರಿಗೆ ಈ ಹಿಂದೆ 1 ಕೆ.ಜಿ 200 ಗ್ರಾಂ ಹೆಚ್ಚುವರಿ ತೂಕ ಮಾಡಿ ರೈತರಿಗೆ ಅನ್ಯಾಯವಾಗಿರುತ್ತದೆ ನಿಗದಿತ ತೂಕದಂತೆ ಖರೀದಿಸಲು ನಿರ್ದೇಶನ ನೀಡುವುದು.
ಚೀಲ ಒಂದಕ್ಕೆ ಅಮಾಲಿ ಖರ್ಚು 30 ರಿಂದ 40 ರೂಗಳನ್ನು ಪಡೆಯುವುದನ್ನು ನಿಲ್ಲಿಸುವುದು.
ರಾಗಿ ಚೀಲಗಳನ್ನು ಎತ್ತಿ ಇಳಿಸಲು ಉಕ್ಕು ಬಳಸುತ್ತಿದ್ದು ಉಕ್ಕಿನಿಂದ ಉಂಟಾಗುವ ತೂತುಗಳಿಂದ ನಿರಂತರವಾಗಿ ರಾಗಿ ಚೀಲದಿಂದ ಸುರಿದು ಹೋಗುತ್ತಿದೆ ಆದ್ದರಿಂದ ಚೀಲಗಳನ್ನು ಎತ್ತಿ ಇಳಿಸಲು ಉಕ್ಕುಗಳನ್ನು ಬಳಸದಂತೆ ಕ್ರಮ ತೆಗೆದುಕೊಳ್ಳುವುದು.
ರಾಗಿ ಉತ್ಪಾದನಾ ಖರ್ಚು ದುಬಾರಿಯಾಗಿದ್ದು ಮುಕ್ತ ಮಾರುಕಟ್ಟೆಯಲ್ಲಿ ಎಂ.ಎಸ್.ಪಿ ಗಿಂತ 1000 ರೂ ದಿಂದ 1200 ರೂ ಕಡಿಮೆ ಬೆಲೆಗೆ ಖರೀದಿಯಾಗುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಆದ್ದರಿಂದ ಈಗ ಹಾಲಿ ನಿಗದಿಪಡಿಸಿರುವುದಕ್ಕಿಂದ ದುಪ್ಪಟ್ಟು ಖರೀದಿಸುವ ಮೂಲಕ ಸ್ಥಿರ ಬೆಲೆಯನ್ನು ಕಾಪಾಡುವುದು.
ಖರೀದಿ ಕೇಂದ್ರಗಳಲ್ಲಿ ಯಾವುದೇ ತಂಟೆ ತಕರಾರುಗಳಿಲ್ಲದೆ ಕಾರ್ಯನಿರ್ವಹಿಸಲು ಸೂಕ್ತ ಬಂದೋಬಸ್ತು ನೀಡುವುದು.
ಖರೀದಿಸಿದ ರಾಗಿ ಹಣವನ್ನು ರೈತರ ಖಾತೆಗೆ ಸಕಾಲದಲ್ಲಿ ಜಮಾ ಮಾಡುವುದು.
ದಿನನಿತ್ಯ ರಾಗಿ ಖರೀದಿ ಪ್ರಾರಂಭದಿಂದ ಖರೀದಿ ಮುಗಿಯುವವರೆವಿಗೆ ಸಂಪೂರ್ಣ ವಿಡಿಯೋ ಚಿತ್ರಿಕರಣ ಮಾಡುವ ಮೂಲಕ ಅನ್ಯಾಯ ಅಕ್ರಮಗಳಿಗೆ ಕಡಿವಾಣ ಹಾಕುವುದು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಧನಂಜಯಾರಾಧ್ಯ , ತಾಲ್ಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಕಾರ್ಯಾಧ್ಯಕ್ಷ ತೋಂಟಾರಾಧ್ಯ ,ಪ್ರಧಾನ ಕಾರ್ಯದರ್ಶಿ ಬಾಳೇಗೌಡ್ರು, ಉಪಾಧ್ಯಕ್ಷರಾದ ಸಿತಾರಾಮಯ್ಯ, ಖಜಾಂಚಿ ಮಹಾಲಿಂಗಪ್ಪ, ತುರುವೇಕೆರೆ ಅಧ್ಯಕ್ಷರಾದ ಗಂಗಾಧರಯ್ಯ ,ಇನ್ನಿತರ ರೈತಮುಖಂಡರಾದ ಪ್ರಕಾಶ್ ಅರಳೀಕೆರೆ, ಮಾಳಪ್ಪ, ಜಯಪ್ರಕಾಶ್ , ಚೇತನ್ , ಬನಶಂಕರಯ್ಯ , ಲೋಕೇಶ್, ಗಿರೀಶ್, ರಾಜಣ್ಣ, ಉಮೇಶ್, ಜುಂಜಣ್ಣ, ಉಪಸ್ಥಿತರಿದ್ದರು
© ಹುಳಿಯಾರು ಸಮಗ್ರ ಸುದ್ಧಿ . All Rights Reserved.