ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ : ಹುಳಿಯಾರಿನ ಆರ ಅಬಾಕಸ್ ಅಕಾಡೆಮಿಯ 12 ಮಕ್ಕಳಿಗೆ ಮೆರಿಟ್ ಅವಾರ್ಡ್
-----------------------
ಹುಳಿಯಾರು: ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಹುಳಿಯಾರಿನ ಆರಾ ಅಬಾಕಸ್ ಅಕಾಡೆಮಿಯ ಒಟ್ಟು 12 ವಿದ್ಯಾರ್ಥಿಗಳು ಮೆರಿಟ್ ಅವಾರ್ಡ್ ಪಡೆದಿರುವುದು ಸಂತಸದ ವಿಚಾರವಾಗಿದ್ದು,ಇದು ಇನ್ನಷ್ಟು ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ವೈದ್ಯರಾದ ಡಾ.ಸಿದ್ಧರಾಮಯ್ಯ ತಿಳಿಸಿದರು.
ಹುಳಿಯಾರಿನ ಆರಾ ಅಬಾಕಸ್ ಅಕಾಡೆಮಿಯಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ಪದಕ ವಿತರಿಸಿ ಅವರು ಮಾತನಾಡಿದರು.
ಅಬಾಕಸ್ ಬಳಕೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚಳವಾಗಿ, ಮೆದುಳಿನ ಶಕ್ತಿ ವೃದ್ಧಿಯಾಗಿ ಒಟ್ಟಾರೆಯಾಗಿ ಅವರ ಸಾಮರ್ಥ್ಯ ಹೆಚ್ಚಿ ,ಸದಾ ಕ್ರಿಯಾಶೀಲವಾಗಿರಲು ಕಾರಣವಾಗುತ್ತದೆ ಎಂದರು. ಮುಂದುವರಿದ ದೇಶವಾದ ಅಮೆರಿಕ ಚೀನಾದಲ್ಲಿ ಇಂದಿಗೂ ಸಹ ಲೆಕ್ಕ ಮಾಡಲು ಅಬಾಕಸ್ ಬಳಕೆಯಲ್ಲಿದ್ದು, ಅಬಾಕಸ್ ಬಳಕೆಯಿಂದ ಜ್ಞಾನ ವಿಕಾಸವಾಗುತ್ತದೆ ಎಂದರು
ಚಾರ್ಟೆಡ್ ಅಕೌಂಟೆಂಟ್ ಕಾರ್ತಿಕ್ ಮಿನ್ನಾ ಮಾತನಾಡಿ ತುಂಬಾ ಪ್ರಾಚೀನ ಕಾಲದಿಂದಲೂ ಬಳಸುತ್ತಿರುವ ಅಬಾಕಸ್ ಮಕ್ಕಳ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಸಾಧನವಾಗಿದ್ದು, ಕಂಪ್ಯೂಟರ್ ಕ್ಯಾಲ್ಕುಲೇಟರ್ ಇಲ್ಲದೇನೆ ಅದಕ್ಕಿಂತ ಮುಂಚಿತವಾಗಿಯೇ ಲೆಕ್ಕ ಮಾಡಿ ಹೇಳುವುದು ಇದರ ವಿಶೇಷತೆಯಾಗಿದೆ ಎಂದರು.
ಅಬಾಕಸ್ ತರಬೇತಿದಾರರಾದ ಲಕ್ಷ್ಮಿ ಮನೋಜ್ ಮಾತನಾಡಿ ಹೈದರಬಾದ್‌ನಲ್ಲಿ ಆನ್ಲೈನ್ ಮೂಲಕ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಹುಳಿಯಾರಿನ 14 ಮಕ್ಕಳು ಸಹ ಭಾಗವಹಿಸಿದ್ದು ಇದರಲ್ಲಿ 12 ಮಕ್ಕಳು ಶೇಕಡ 80 ಅಂಕಗಳಿಸಿದ್ದು,
12 ಮಕ್ಕಳಲ್ಲಿ 7 ಜನ ಮಕ್ಕಳಿಗೆ ಮೆರಿಟ್ ಅವಾರ್ಡ್ ಹಾಗೂ 5 ಜನ ಮಕ್ಕಳಿಗೆ ಚಾಂಪಿಯನ್ ಆಫ್ ಚಾಂಪಿಯನ್ ಅವಾರ್ಡ್ ಬಂದಿದೆ.
ಈ ಸಂದರ್ಭದಲ್ಲಿ ಮನೋಜ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.