ತಂಬಾಕು ಮುಕ್ತ ಅಭಿಯಾನ ಪ್ರಬಂಧ | ಬಹುಮಾನ ವಿತರಣೆ

ಹುಳಿಯಾರು : ತಂಬಾಕು ಮುಕ್ತ ಯುವ ಅಭಿಯಾನ 2.0 ಕಾರ್ಯಕ್ರಮದ ಅಡಿ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ಕನಕದಾಸ ಪ್ರೌಢಶಾಲೆ. ಟಿ ಆರ್ ಎಸ್ ಆರ್ ಪ್ರೌಢಶಾಲೆ. ಬಸವೇಶ್ವರ ಪ್ರೌಢಶಾಲೆ. ಶ್ರೀ ಯೋಗಿ ನಾರಾಯಣ ತಾಂತ್ರಿಕ ಐಟಿಐ ಕಾಲೇಜು ಗಳಲ್ಲಿ ಪ್ರಥಮ. ದ್ವಿತೀಯ. ತೃತಿಯ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವಿದ್ಯಾರ್ಥಿಗಳಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತುಮಕೂರು ಮತ್ತು ತಾಲ್ಲೂಕು ತಂಬಾಕು ನಿಯಂತ್ರಣ ಕೋಶ ಚಿಕ್ಕನಾಯಕನಹಳ್ಳಿ ವತಿಯಿಂದ ವಿತರಿಸಲಾಯಿತು. ಇದು ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮದಲ್ಲಿ ನೀಡಲಾಯಿತು.ಶಾಲೆಗಳಿಗೆ ನಾಮಫಲಕ ಮತ್ತು ಪೋಸ್ಟರ್ ಗಳನ್ನೂ ವಿತರಿಸಲಾಯಿತು
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪರವಾಗಿ ಹರೀಶ್ ರವರು ತಾಲೂಕು ತಂಬಾಕು ನಿಯಂತ್ರಣ ಕೋಶದ ಪರವಾಗಿ ಕ್ಷೇತ್ರ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಿವಿ ವೆಂಕಟರಾಮಯ್ಯನವರು ಉಪಸ್ಥಿತರಿದ್ದರು.

66

© ಹುಳಿಯಾರು ಸಮಗ್ರ ಸುದ್ಧಿ . All Rights Reserved.