ಜ. 15 ಕ್ಕೆ ಕೋರಗೆರೆ ಗ್ರಾ.ಪಂ. ಉಪಾಧ್ಯಕ್ಷರ ಚುನಾವಣೆ

ಕೆ.ಕೆ. ಹನುಮಂತಪ್ಪನವರ ರಾಜೀನಾಮೆಯಿಂದ ತೆರವಾಗಿದ್ದ ಕೋರಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದ್ದು.ದಿನಾಂಕ: 15-01-2025ರ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯ ಒಳಗಾಗಿ ಕೋರಗೆರೆ ಗ್ರಾಮ ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ಚುನಾವಣೆ ನಡೆಯಲಿದ್ದು ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಖುದ್ದಾಗಿಯಾಗಲೀ ಅಥವಾ ಸೂಚಕರ ಮೂಲಕವಾಗಲೀ, ಅಭ್ಯರ್ಥಿಗಳ ಲಿಖಿತ ಒಪ್ಪಿಗೆ ಹಾಗೂ ನಾಮ ನಿರ್ದೇಶನ ಪತ್ರವನ್ನು ನಿಗದಿತ ನಮೂನೆಯಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಬೆಳಗ್ಗೆ 11.06 ರಿಂದ 11.11 ಗಂಟೆಯವರೆಗೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, 11.12 ರಿಂದ 11.22 ರವರೆಗೆ ನಾಮಪತ್ರ ಹಿಂಪಡೆಯಬಹುದಾಗಿದೆ ನಂತರ ಚುನಾವಣೆ ನಡೆಸಿ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಫಲಿತಾಂಶ ಘೋಷಣೆಯಾಗಲಿದೆ.

122

© ಹುಳಿಯಾರು ಸಮಗ್ರ ಸುದ್ಧಿ . All Rights Reserved.