ಹೊಯ್ಸಳಕಟ್ಟೆಯಲ್ಲಿ ಮಹಿಳೆಯರಿಗೆ ಯುವ ಉದ್ಯಮಿ ತರಬೇತಿ ಆರಂಭ

ಮಹಿಳೆಯರು ಮನೆ ಕೆಲಸದ ಜತೆಯಲ್ಲಿ ಉದ್ಯಮಿಗಳಾಗಿ ಸಮಾಜ ಕಟ್ಟುವ ಕೆಲಸದಲ್ಲಿ ಮುಂದಾಗಿ ಆಥಿ೯ಕವಾಗಿ ಸ್ವಾವಲಂಬಿಯಾಗಬೇಕು ಎಂದು ಸೃಜನ ಮಹಿಳಾ ಸಂಘಟನೆಯ ಅಧ್ಯಕ್ಷೆ ಎನ್.ಇಂದಿರಮ್ಮ ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊಯ್ಸಳಕಟ್ಟೆಯಲ್ಲಿ ಗುರುವಾರ ನವದಿಶಾ ಸಂಸ್ಥೆ ವತಿಯಿಂದ ಮಹಿಳೆಯರಿಗೆ ನಡೆದ ಯುವ ಉದ್ಯಮಿ ತರಬೇತಿ ಕಾಯ೯ಕ್ರಮ ಉದ್ಗಾಟಿಸಿ ಮಾತನಾಡಿದರು.

ಸುವರ್ಣ ವಿದ್ಯಾಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಮಹಿಳೆಯರಿಗೆ ಬದ್ಧತೆ, ಆತ್ಮವಿಶ್ವಾಸ ಮತ್ತು ಜನರ ಒಡನಾಟ ಉದ್ಯಮಿಯಾಗಲು ಮುಖ್ಯ ಎಂದು ಹೇಳಿದರು. ನವದಿಶಾ ಸಂಸ್ಥೆಯ ತರಬೇತುದಾರರಾದ ಸಿ.ಎಂ.ಎಸ್ ಗೌಡ ಮಾತನಾಡಿ ಒಂದು ವಾರ ಕಾಲ ನಡೆಯುವ ತರಬೇತಿಯಲ್ಲಿ ಮಹಿಳೆಯರು ಬಯಸುವ ವಿವಿಧ ಉದ್ಯಮಗಳ ಬಗ್ಗೆ ತರಬೇತಿ ನಂತರ ಉದ್ಯಮ ಆರಂಭಿಸಲು ಅಗತ್ಯವಿರುವವರಿಗೆ ಹಣಕಾಸು, ದೊರೆಯುವ ಸಂಸ್ಥೆ ಅಥವಾ ಸಬ್ಸಿಡಿ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ನೀಡಲಾಗುವುದು ಎಂದರು. ಉದ್ಯಮ ಆರಂಭಿಸಿದ ಮೇಲೆ ಉತ್ಪನ್ನಗಳ ಮಾರಾಟಕ್ಕೆ ಅಗತ್ಯ ಮಾರುಕಟ್ಟೆಯ ಸೌಲಭ್ಯದ ಬಗ್ಗೆ ಮಾಹಿತಿ,ಮಹಿಳೆಯು ಯಶಸ್ವಿ ಉದ್ಯಮಿಯಾಗಲು ಮೂರು ವರ್ಷಗಳ ಕಾಲ ಅಗತ್ಯ ಮಾರ್ಗದರ್ಶನವನ್ನು ಕೊಡಲಾಗುವುದು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಕೆಂಪಯ್ಯ ಮಾತನಾಡಿ ಪ್ರತಿಯೊಬ್ಬರಿಗೂ ವಿಶೇಷವಾದ ಶಕ್ತಿ ಮತ್ತು ಕುಶಲತೆ ಇದೆ. ಅದನ್ನು ಬಳಸಿಕೊಂಡು ಉದ್ಯಮಿಗಳಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ನವದಿಶಾ ಸಂಸ್ಥೆಯ ಅಶ್ವಿನಿ,ತಾಪಂ ಮಾಜಿ ಸದಸ್ಯೆ ಕವಿತಾ ಪ್ರಕಾಶ್, ಸಂಜೀವಿನಿ ಒಕ್ಕೂಟದ ಶಶಿಕಲಾ,ತನುಜಾ, ಶ್ರೀದೇವಿ, ಕಾವ್ಯ ಮತ್ತು ಪವಿತ್ರ, ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ಮಹಿಳೆಯರು ಹಾಗೂ ಗ್ರಂಥಪಾಲಕ ನಾಗರಾಜು ಉಪಸ್ಥಿತರಿದ್ದರು.

209

© ಹುಳಿಯಾರು ಸಮಗ್ರ ಸುದ್ಧಿ . All Rights Reserved.