ಹುಳಿಯಾರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮದಡಿಯಲ್ಲಿ 2024-25 ನೇ ಸಾಲಿನ ಜಿಲ್ಲಾ ಹಂತದ ಪ್ರಗತಿ ಪರಿಶೀಲನಾ ಸಭೆ ಪಟ್ಟಣದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್ .ಎಸ್ ಆರ್ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಹಾಗೂ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಪೂರ್ವಪರೀಕ್ಷೆ ಗಳನ್ನು ನಡೆಸಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಯಾವರೀತಿ ಸಜ್ಜುಗೊಳಿಸಬೇಕು ಎಂಬುದರ ಬಗ್ಗೆ, ಹಾಗೂ ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡುವಂತೆ ಪೋಷಕರಿಗೆ ತಿಳಿಸುವುದರ ಬಗ್ಗೆ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಮನಮೋಹನ್ ಉಪನಿರ್ದೇಶಕರು ತುಮಕೂರು ದಕ್ಷಿಣ ಜಿಲ್ಲೆ, ಗಿರಿಜಾ ಉಪನಿರ್ದೇಶಕರು ಮಧುಗಿರಿ ಶೈಕ್ಷಣಿಕ ಜಿಲ್ಲೆ, ವರ್ಧನ್ ನಿರ್ದೇಶಕರು ಶಿಕ್ಷಣ ಇಲಾಖೆ, ಕೆ. ಮಂಜುನಾಥ್ ಡಯಟ್ ಪ್ರಾಂಶುಪಾಲರು, ಮಾದವ್ ರೆಡ್ಡಿ ಶಿಕ್ಷಣಾಧಿಕಾರಿ, ಸಿ ಎಸ್ ಕಾಂತರಾಜು ಬಿ.ಇ.ಓ ಚಿ.ನಾ.ಹಳ್ಳಿ, ವಾಸವಿ ವಿದ್ಯಾಸಂಸ್ಥೆಯ ಟಿ.ಎಲ್.ಬಾಲೇಶ್ ಅದ್ಯಕ್ಷರು ಎಲ್ಆರ್.ಬಾಲಾಜಿ ಕಾರ್ಯದರ್ಶಿ, ಎಲ್ ಆರ್ ಚಂದ್ರ ಶೇಖರ್ ಆಢಳಿತಾಧಿಕಾರಿಗಳು , ಕೆ.ಎಂ.ಗಂಗಾಧರಯ್ಯ ಅಧ್ಯಕ್ಷರು ತಾ.ಮು.ಶಿ.ಸಂಘ , ಗವಿರಂಗಯ್ಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಬಿ.ಆರ್.ಸಿ ನರಸಿಂಹಮೂರ್ತಿ, ತುಮಕೂರು ಹಾಗೂ ಮಧುಗಿರಿ ಜಿಲ್ಲೆಯ ಎಲ್ಲಾ ಬಿ.ಇ.ಓ ಗಳು , ಬಿ.ಆರ್.ಸಿ ಗಳು , ಸಿ.ಆರ್.ಪಿ ಗಳು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.