ಚಿಕ್ಕನಾಯಕನಹಳ್ಳಿ : ಸೋಮವಾರ ನಿಧನರಾದ ತಾಲೂಕಿನ ಜನತಾ ಕ್ಲೀನಿಕ್ ಹಾಗೂ ಲ್ಯಾಬೋರೇಟರಿಯ ಮಾಲೀಕರು ಹಿರಿಯ ವೈಧ್ಯರಾದ ಸಿ.ಎಂ. ಸುರೇಶ್ [79 ವರ್ಷ] ನಿಧನಕ್ಕೆ ತಾಲೂಕು ವೈಧ್ಯರ ಸಂಘ ಕಂಬನಿ ಮಿಡಿದಿದೆ.
ತಾಲೂಕಿನಲ್ಲೆ ಪ್ರಪ್ರಥಮವಾಗಿ ಎಕ್ಸ್ ರೇ ಮತ್ತು ಲ್ಯಾಬೋರೇಟರಿ ಪ್ರಾರಂಭ ಮಾಡಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿಶೇಷವಾಗಿ ಹುಚ್ಚು ನಾಯಿ ಕಡಿತ ಹಾಗೂ ಹಾವು ಕಡಿತಕ್ಕೆ ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ.
70 ರ ದಶಕದಲ್ಲೆ ಜನತಾ ಲ್ಯಾಬ್ ಪ್ರಾರಂಭಮಾಡಿ ವೈಧ್ಯಕೀಯ ಕ್ಷೇತ್ರಕ್ಕೆ ಸುದೀರ್ಘ ಕಾಲ ಸೇವೆ ಸಲ್ಲಿಸಿ ತಾಲೂಕಿನಾಧ್ಯಂತ ಮನೆ ಮಾತಾಗಿದ್ದರು. ಹಾಗೂ ತಾಲೂಕು ವೈಧ್ಯರ ಸಂಘದ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದರು,
ಅವರ ಅಗಲಿಕೆ ತಾಲೂಕಿಗೆ ಹಾಗೂ ವೈಧ್ಯರ ಸಂಘಕ್ಕೆ ತುಂಭಲಾರದ ನಷ್ಟವಾಗಿದೆ ಎಂದು ಮೃತರಿಗೆ ತಾಲೂಕು ವೈಧ್ಯರ ಸಂಘದ ಗೌರವ ಅಧ್ಯಕ್ಷರಾದ ಜಗದೀಶ್, ಅಧ್ಯಕ್ಷರಾದ ನಾಗರಾಜ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ವೈಧ್ಯ ವೃಂದ ಕಂಬನಿ ಮಿಡಿಯಿತು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.