ತೋಟದ ಮನೆಗೆ ಬೆಂಕಿ

ಹುಳಿಯಾರು ಹೋಬಳಿ ವ್ಯಾಪ್ತಿಯ ಗುರುವಾಪುರ ಗ್ರಾಮದ ವಿಶಾಲಾಕ್ಷಮ್ಮ ಅವರ ತೋಟದ ಮನೆಗೆ ಶುಕ್ರವಾರ ಸಂಜೆ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಹೋಗಿದೆ.
ಸಂಜೆ 6 ಗಂಟೆಗೆ ಸಮಯದಲ್ಲಿ ಹೆಂಚಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಕ್ಷಣ ಮಾತ್ರದಲ್ಲಿ ಮನೆಯ ಅಟ್ಟದಲ್ಲಿದ್ದ ಕಾಯಿ ಹಾಗೂ ಕೊಬ್ಬರಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿ ನಷ್ಟ ಸಂಭವಿಸಿದೆ ಮನೆಯಲ್ಲಿ ವಾಸವಿದ್ದ ವಿಶಾಲಾಕ್ಷಮ್ಮ ಸಂಜೆ ತಂದೆಯ ಮನೆಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

113

© ಹುಳಿಯಾರು ಸಮಗ್ರ ಸುದ್ಧಿ . All Rights Reserved.